Tuesday, November 2, 2010

ಪರಿಚಯ

ನಮಸ್ತೆ ನನ್ನ ಎಲ್ಲಾ ಪ್ರಿಯ ಗೆಳೆಯರಿಗೆ,
ಪರಿಚಯ ಅಂದ ಕೂಡಲೇ ....ಒಂದು ಕುತೂಹಲ ಮೂಡುವುದು ಸಹಜ ನಮ್ಮಲ್ಲಿ.. ಯಾರಿವರು? , ಏನಿರಬಹುದು ? ಹೀಗೆ ಹತ್ತು ಹಲವಾರು ಪ್ರಶ್ನೆಗಳು. ಆದ್ರೆ ನನ್ನ ಬಗ್ಗೆ ಹೇಳೋವಂತಹುದು ನನ್ನಲ್ಲಿ ಹಾಗೇನೂ ವಿಶೇಷತೆಗಳು ಇಲ್ಲ. ಯಾಕೆಂದರೆ ನನ್ನ ಬಗ್ಗೆ ನೀವೇ ಹೇಳಬೇಕು. ಆದ್ರೂ ಅದಕ್ಕಿಂತ ಮುಂಚಿತವಾಗಿ, ನಾನುಯಾರು ಅನ್ನೋದನ್ನಾದ್ರೂ ತಿಳಿಸಲೇ ಬೇಕಲ್ವಾ....ನನ್ನ ಹೆಸರು ಸ್ವಪ್ನಾ. ನಾನು ಮೂಲತಃ ಮಂಗಳೂರು ತಾಲೂಕಿನ ಉಳ್ಳಾಲ ಗ್ರಾಮದವಳು. ವಿದ್ಯಾಭ್ಯಾಸ ಎಲ್ಲಾ ಅಲ್ಲೇ. ಅಕ್ಕರೆಯಿಂದ ಕೂಡಿದ ಕುಟುಂಬದಲ್ಲಿ ನಾನು ನನ್ನ ತಾಯಿಗೆ ಮೂರನೇ ಮಗಳು. ಜೀವನದಲ್ಲಿ ಯಾರ ಹಂಗೂ ಇಲ್ಲದೆ ನನ್ನ ಸ್ವ ಸಂಪಾದನೆಯಲ್ಲಿ ನನ್ನ ಜೀವನವನ್ನು ಸಾಗಿಸಿ ನನ್ನ ತಾಯಿಯನ್ನ ಪ್ರೀತಿಯಿಂದ ನೋಡ್ಕೋಬೇಕು. ನನ್ನ ಮೊದಲ ದೇವರೇ ಅಮ್ಮ. ನನ್ನ ಪ್ರತಿ ಹೆಜ್ಜೆಗೂ ಅಮ್ಮನ ಆಶಿರ್ವಾದ, ಪ್ರೋತ್ಸಾಹವೇ ಕಾರಣ.
ಸಂಗೀತ ಅಂದ್ರೆ ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ಸಂಗೀತವನ್ನ ಆಲಿಸೋದು, ಸಮುದ್ರ ತೀರದಲ್ಲಿ ಕೂರುವುದು, ಸುಂದರ ವಾತಾವರಣವನ್ನು ನೋಡುತ್ತಾ ಸವಿಯೋದು, ಕುಣಿಯುವುದು, ಹಾಗೆಯೇ ನನಗೆ ತಿಳಿದ ವಿಷಯವನ್ನು ಇತರರಿಗೆ ತಿಳಿಸುವುದು, ಮನೆಯವರೊಂದಿಗೆ ದೂರ ಪ್ರಯಾಣ, ಇವಲ್ಲಾ ನನಗೆ ತುಂಬಾನೆ ಇಷ್ಟ. ಸ್ನೇಹಿತರು ಸಾಕಷ್ಟು ಇದ್ದರೂ, ನನ್ನ ಬಾಲ್ಯದ ಜೀವನದಲ್ಲಿದ್ದ ಅಂದರೆ ಪ್ರಾಥಮಿಕ ಶಾಲಾ ಜೀವನದಲ್ಲಿ ಇದ್ದ ಗೆಳೆಯರ ನೆನಪು ಇನ್ನೂ ಚಿರವಾಗಿದೆ. ಕೆಲವೊಂದು ಸಾರಿ ಹಿಂದಿ ಕವಯಿತ್ರಿ ಸುಭದ್ರ ಕುಮಾರಿ ಚೌಹಾನ್ ರವರ ಪದ್ಯ ನೆನಪಾಗುತ್ತೆ ...................
ಈಗ್ಲೇ ಜಾಸ್ತಿ ಆಯ್ತು ಅನ್ಸುತ್ತೆ ನನ್ನ ಮಾತು...ಇನ್ನು ಏನಾದ್ರೂ ಕೇಳೋದಿದ್ರೆ ಕೇಳಿ..........

ಸದಾ ಪ್ರೀತಿಯಿಂದ ಶುಭ ಹಾರೈಸೋ.......ಸ್ವಪ್ನಾ.ಎನ್ ಶ್ರೀಯಾನ್.

2 comments:

  1. ತಾಣಗಳ ಲೋಕಕ್ಕೆ ನಿಮಗೆ ಹೃದಯಪೂರ್ವಕ ಸ್ವಾಗತ ಸ್ವಪ್ನಾ. ಉತ್ತಮ ಬರಹಗಳು, ವಿಚಾರಗಳಿ೦ದ ನಿಮ್ಮ ತಾಣವನ್ನು ಸು೦ದರಗೊಳಿಸುವ ಕೆಲಸ ಈಗ ಶುರು..! ಅಲ್ಲವೆ? ನಿಮಗೆ ಶುಭವಾಗಲಿ.

    ಅನ೦ತ್

    ReplyDelete
  2. ಧನ್ಯವಾದಗಳು ಸರ್.....

    ReplyDelete