ಸರಿಗಮಪದನಿ ಸಪ್ತಸ್ವರ
ಅರಳಿತು ಮನದಿ ಇಂಚರ - 2
ಹಾಡಿತು ಕೋಗಿಲೆ ನಲಿಯಿತು ಮಯೂರ
ಸವಿಯುವ ದುಂಬಿಯ ಝೇಂಕಾರ
ಸವಿಯುವ ದುಂಬಿಯ ಝೇಂಕಾರ || ಸರಿಗಮ||(ಪಲ್ಲವಿ)
ಮೂಡಣದೀ ಬೆಳಗಿಹ ಸೂರ್ಯ
ಚೆಲ್ಲಿದ ಕಿರಣದಿ ಉರಿಯೋ ಶೌರ್ಯ
ಚೆಲ್ಲಿದ ಕಿರಣದಿ ಉರಿಯೋ ಶೌರ್ಯ
ಚಿಲಿಪಿಲಿ ಎನ್ನುತಾ ಹಾಡಿದೆ ಹಕ್ಕಿ
ಹರಿದಿದೆ ನದಿಯು ಉಕ್ಕಿ ಉಕ್ಕಿ
ಹರಿದಿದೆ ನದಿಯು ಉಕ್ಕಿ ಉಕ್ಕಿ ||ಸರಿಗಮ||(ಚರಣ-1)
ಸಾಲಾಗಿ ಬರುತಿದೆ ಅಲೆಗಳು
ಅಲೆಯ ಮೇಲೆ ತೇಲಿದೆ ಸ್ವರಗಳು
ಸರಿಗಮಪದನಿ ನಿದಪಮಗರಿಸ
ಸೇರಿತು ಸ್ವರವು ಆಲಿಸೆ ಸಂತಸ
ಸೇರಿತು ಸ್ವರವು ಆಲಿಸೆ ಸಂತಸ ||ಸರಿಗಮ||(ಚರಣ-2)
ಬಾನಾಡಿ ಮೂಡಿದೆ ಮೋಡಾ
ತಂಪಾಗಿ ನೀ ಭೂಮಿಯೊಳ್ ಬೀಳಾ
ಹನಿ ಹನಿ ಇಬ್ಬನಿ ಮುಟ್ಟಲು ಬುವಿಯ
ತುಂಬಿತು ಮಡಿಲು ಭೂಮಿ ತಾಯ
No comments:
Post a Comment